ಅಂಥ ಬ್ರಹ್ಮಾಂಡವ ಒಂಬತ್ತುಸಾವಿರದ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ದೀಪಿಕಾಧಿಕವೆಂಬ ಭುವನ.
ಆ ಭುವನದೊಳು ಏಕಪಾದನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾಲ್ವತ್ತೈದುಕೋಟಿ ಬ್ರಹ್ಮ ರುದ್ರ ನಾರಾಯಣರು,
ನಾಲ್ವತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು,
ನಾಲ್ವತ್ತೆರಡುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava ombattusāvirada embatteṇṭu
brahmāṇḍavanoḷakoṇḍudondu dīpikādhikavemba bhuvana.
Ā bhuvanadoḷu ēkapādanemba mahārudramūrti ihanu.
Ā rudramūrtiya ōlagadalli
nālvattaidukōṭi brahma rudra nārāyaṇaru,
nālvattaidukōṭi indracandrādityaru
vēdapuruṣaru munīndraru,
nālvatteraḍukōṭi dēvarkaḷiharu nōḍā
apramāṇakūḍalasaṅgamadēvā.