ಅಂಥ ಬ್ರಹ್ಮಾಂಡವ ಹತ್ತು ಸಾವಿರದ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಾಂತ್ಯತೀತೆಯೆಂಬ ಭುವನ.
ಆ ಭುವನದೊಳು ದ್ವಿಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐವತ್ತುಕೋಟಿ ಬ್ರಹ್ಮ ನಾರಾಯಣ ರುದ್ರರು,
ಐವತ್ತುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು,
ನಾಲ್ವತ್ತೆ ಮೂರುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.