Index   ವಚನ - 64    Search  
 
ನವನಾರಿ ಕುಂಜರ ಪಂಚನಾರಿ ತುರಂಗವೆಂಬವನ ಮೇಲೆ ಬಿರಿದ ಕಟ್ಟಿದ ಬಳಿಕ, ಪರಶಿವಂಗೆ ಸಾಕಾರವಾಗಿರಬೇಕು. ಬಸವಾದಿ ಪ್ರಮಥರಿಗೆ ಬಲುಗಯ್ಯನಾಗಿರಬೇಕು. ಬಸವಣ್ಣಂಗೆ ಲಿಂಗವಾಗಿರಬೇಕು. ಪ್ರಭುದೇವರಿಗೆ ಪ್ರಣವಸ್ವರೂಪವಾಗಿರಬೇಕು. ಅಮುಗೇಶ್ವರನೆಂಬ ಲಿಂಗವನರಿದಡೆ ನಿರ್ಭೇದ್ಯನಾಗಿ ನಿಜಲಿಂಗೈಕ್ಯನಾಗಿಪ್ಪನಯ್ಯಾ.