Index   ವಚನ - 66    Search  
 
ನಾನೆ ಗುರುವಾದಬಳಿಕ ಇನ್ನಾರ ನೆನೆವೆನಯ್ಯಾ? ನಾನೆ ಲಿಂಗವಾದಬಳಿಕ ಇನ್ನಾರ ನೆನೆವೆನಯ್ಯಾ? ನಾನೆ ಜಂಗಮವಾದಬಳಿಕ ಇನ್ನಾರ ನೆನೆವೆನಯ್ಯಾ? ಎನಗೆ ಗುರುವಾದಾತನು ನೀನೆ, ಎನಗೆ ಲಿಂಗವಾದಾತನು ನೀನೆ. ಎನಗೆ ಜಂಗಮವಾದಾತನು ನೀನೆ. ಎನಗೆ ಪಾದೋದಕ ಪ್ರಸಾದವಾದಾತನು ನೀನೆ. ಅಮುಗೇಶ್ವರಲಿಂಗವಾಗಿ ಎನ್ನ ಕರಸ್ಥಲಕ್ಕೆ ಬಂದಾತನು ನೀನೆ, ಪ್ರಭುವೆ.