ಕಾಯದ ಕಳವಳದಿಂದ, ಕರಣದ ಕಳವಳದಿಂದ,
ಇಂದ್ರಿಯ ಕಳವಳದಿಂದ,
ವಿಷಯದ ಕಳವಳದಿಂದ, ಮೋಹದ ಕಳವಳದಿಂದ
ಮಾಯಾಪಾಶ ಪಾಕುಳದಲ್ಲಿ ಜನ್ಮ ಜರೆ
ಮರಣ ಭವಕ್ಕೊಳಗಾದ ಭವಿಗೆ ಅನಂತದೈವವಲ್ಲದೆ,
ಜನ್ಮ ಜರೆ ಮರಣ ಭವವಿರಹಿತ ಸದ್ಭಕ್ತಂಗೆ ಅನಂತದೈವವುಂಟೆ ?
ಸೂಳೆಗೆ ಅನಂತಪುರುಷರ ಸಂಗವಲ್ಲದೆ,
ಗರತಿಗೆ ಅನಂತಪುರುಷರ ಸಂಗವುಂಟೆ ?
ಚೋರಂಗೆ ಪರದ್ರವ್ಯವಲ್ಲದೆ, ಸತ್ಯಸಾತ್ವಿಕಂಗೆ ಪರದ್ರವ್ಯವುಂಟೆ ?
ಹಾದರಗಿತ್ತಿಗೆ ಹಲವು ಮಾತಲ್ಲದೆ, ಪರಮಪತಿವ್ರತೆಗೆ ಹಲವು ಮಾತುಂಟೆ ?
ಪರಮಪಾತಕಂಗೆ ಹಲವು ತೀರ್ಥ, ಹಲವು ಕ್ಷೇತ್ರವಲ್ಲದೆ ?
ಪರಮಸದ್ಭಕ್ತಂಗೆ ಹಲವು ತೀರ್ಥ, ಹಲವು ಕ್ಷೇತ್ರಗಳುಂಟೆ ?
ಗುರುದ್ರೋಹಿ ಲಿಂಗದ್ರೋಹಿ ಚರದ್ರೋಹಿ,
ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಭಕ್ತದ್ರೋಹಿ,
ಮಾತೃದ್ರೋಹಿ ಪಿತೃದ್ರೋಹಿಗೆ ಕಾಲಕಾಮಕರ್ಮದ ಭಯವಲ್ಲದೆ
ಸತ್ಯ ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ ಸತ್ಕಾಯಕ ಸದ್ಭಕ್ತಿಪ್ರಿಯ
ಸದ್ಧರ್ಮಿಗೆ, ಕಾಲಕಾಮಕರ್ಮದ ಭಯವುಂಟೆ,
ಕಲಿದೇವರದೇವಾ ?
Art
Manuscript
Music Courtesy:
Video
TransliterationKāyada kaḷavaḷadinda, karaṇada kaḷavaḷadinda,
indriya kaḷavaḷadinda,
viṣayada kaḷavaḷadinda, mōhada kaḷavaḷadinda
māyāpāśa pākuḷadalli janma jare
maraṇa bhavakkoḷagāda bhavige anantadaivavallade,
janma jare maraṇa bhavavirahita sadbhaktaṅge anantadaivavuṇṭe?
Sūḷege anantapuruṣara saṅgavallade,
garatige anantapuruṣara saṅgavuṇṭe?
Cōraṅge paradravyavallade, satyasātvikaṅge paradravyavuṇṭe?
Hādaragittige halavu mātallade, paramapativratege halavu mātuṇṭe?
Paramapātakaṅge halavu tīrtha, halavu kṣētravallade?
Paramasadbhaktaṅge halavu tīrtha, halavu kṣētragaḷuṇṭe?
Gurudrōhi liṅgadrōhi caradrōhi,
vibhūti rudrākṣi mantra pādōdaka prasāda bhaktadrōhi,
mātr̥drōhi pitr̥drōhige kālakāmakarmada bhayavallade
satya sadācāra sadbhakti satkriyā samyajñāna satkāyaka sadbhaktipriya
sad'dharmige, kālakāmakarmada bhayavuṇṭe,
kalidēvaradēvā?
Is there not much talk to the lover, but many words to the Lord?
Paramatpadakam has many tirthas, not many realms?
Paramasadbhaktam has many tirthas, many fields?
Aphrodisiac
Vibhuti Rudrakshi Mantra Pedicure Prasad Devotee,
Aside from the fear of timelessness for the patriarch
Truth and righteousness
There is a fear of timeliness,