Index   ವಚನ - 321    Search  
 
ಸಾಧನೆಯ ಕಲಿತು ಆಣೆಯ ತಪ್ಪಿಸಲರಿಯದವನ ಕೈಯಲಿ ಅಲಗಿದ್ದಡೇನಯ್ಯ? ಮಾಡುವದಕ್ಕೆ ಕರ್ಮ ದುರಿತದ ವರ್ಮವನರಿಯದವನು ಸಕಲಶಾಸ್ತ್ರವನೋದಿದಡೇನಯ್ಯ? ಗಿಳಿಯೋದಿ ತನ್ನ ಅಶುದ್ಧವ ತನ್ನ ಮೂಗಿನಲ್ಲಿ ಕಚ್ಚಿ ತೆಗೆದಂತೆ ಆಯಿತ್ತೆಂದ, ಕಲಿದೇವರದೇವಯ್ಯ.