ಹೊಗಬಾರದು ಕಲ್ಯಾಣವನಾರಿಗೆಯೂ
ಹೊಕ್ಕಡೇನು? ಕಲ್ಯಾಣದ ಸ್ಥಾನಮಾನಂಗಳ ನುಡಿಯಬಾರದು.
ಈ ಕಲ್ಯಾಣದ ಕಡೆಯ ಕಾಣಬಾರದು.
ಕಲ್ಯಾಣದೊಳಗೆ ಹೊಕ್ಕೆಹೆವೆಂದು ಕಲ್ಯಾಣ ಚರಿತ್ರರಾದೆಹೆವೆಂದು
ದೇವ ದಾನವ ಮಾನವರೆಲ್ಲರೂ ಭಾವಿಸುತ್ತಿರ್ದುರು ನೋಡಯ್ಯಾ ಕಲ್ಯಾಣವನು.
ಅನಂತಮೂರ್ತಿಗಳು ಅನಂತ ಸ್ಥೂಲಮೂರ್ತಿಗಳು
ಅನಂತ ಸೂಕ್ಷ್ಮಮೂರ್ತಿಗಳು ಅನಂತ ಮಂತ್ರಧ್ಯಾನರೂಪರು
ಪುಣ್ಯಕ್ಕೆ ಅಭಿಲಾಷೆಯ ಮಾಡುವವರು ಪೂಜಕರು ಯೋಗಿಗಳು
ಭೋಗಿಗಳು ದ್ವೈತರು ಅದ್ವೈತರು ಕಾಮಿಗಳು ನಿಷ್ಕರ್ಮಿಗಳು ಆಶ್ರಿತರು
ಅದೆಂತು ಹೊಗಬಹುದಯ್ಯಾ ಕಲ್ಯಾಣವನು?
ಲಿಂಗದೃಷ್ಟಂಗಲ್ಲದೆ ಲಿಂಗವೇದ್ಯಂಗಲ್ಲದೆ
ಲಿಂಗಗಂಭೀರಂಗಲ್ಲದೆ ಪ್ರಸಾದ ಕುಳಾನ್ವಯಂಗಲ್ಲದೆ
ಆಸೆಗೆಡೆಗುಡದಿಪ್ಪುದೆ ಕಲ್ಯಾಣ.
ಸರ್ವಾಂಗ ವರ್ಣವಳಿದು ಕುಲಮದ ತಲೆದೋರದೆ
ಭಕ್ತಿ ನಿತ್ಯವಾದುದೆ ಕಲ್ಯಾಣ.
ಈ ಕಲ್ಯಾಣವೆಂಬ ಮಹಾಪುರದೊಳಗೆ
ಬಸವಣ್ಣನೂ ನಾನೂ ಕೂಡಿ ಹದುಲಿರ್ದೆವು ಕಾಣಾ,
ಕಲಿದೇವಯ್ಯ.
Art
Manuscript
Music
Courtesy:
Transliteration
Hogabāradu kalyāṇavanārigeyū
hokkaḍēnu? Kalyāṇada sthānamānaṅgaḷa nuḍiyabāradu.
Ī kalyāṇada kaḍeya kāṇabāradu.
Kalyāṇadoḷage hokkehevendu kalyāṇa caritrarādehevendu
dēva dānava mānavarellarū bhāvisuttirduru nōḍayyā kalyāṇavanu.
Anantamūrtigaḷu ananta sthūlamūrtigaḷu
ananta sūkṣmamūrtigaḷu ananta mantradhyānarūparu
puṇyakke abhilāṣeya māḍuvavaru pūjakaru yōgigaḷu
bhōgigaḷu dvaitaru advaitaru kāmigaḷu niṣkarmigaḷu āśritaru
Adentu hogabahudayyā kalyāṇavanu?
Liṅgadr̥ṣṭaṅgallade liṅgavēdyaṅgallade
liṅgagambhīraṅgallade prasāda kuḷānvayaṅgallade
āsegeḍeguḍadippude kalyāṇa.
Sarvāṅga varṇavaḷidu kulamada taledōrade
bhakti nityavādude kalyāṇa.
Ī kalyāṇavemba mahāpuradoḷage
basavaṇṇanū nānū kūḍi hadulirdevu kāṇā,
kalidēvayya.