Index   ವಚನ - 2    Search  
 
ಬಾರದಿರು ಬ್ರಹ್ಮನ ಅಂಡದಲ್ಲಿ, ಬೆಳೆಯದಿರು ವಿಷ್ಣುವಿನ ಕುಕ್ಷಿಯಲ್ಲಿ, ಸಾಯದಿರು ರುದ್ರನ ಹೊಡೆಗಿಚ್ಚಿನಲ್ಲಿ. ಹುಟ್ಟಿದ ಅಂಡವನೊಡೆ,ಬೆಳೆದ ಕುಕ್ಷಿಯ ಕುಕ್ಕು, ಹೊಯ್ವ ಹೊಡೆಗಿಚ್ಚ ಕೆಡಿಸು. ಮೂರುಬಟ್ಟೆಯ ಮುದಿಡು, ಒಂದರಲ್ಲಿ ನಿಂದು ನೋಡು. ಆ ಒಂದರಲ್ಲಿ ಸಂದಿಲ್ಲದ ಅಂಗವೇ ನೀನಾಗು ಸದಾಶಿವಮೂರ್ತಿಲಿಂಗಕ್ಕೆ.