ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ
ಮುಟ್ಟದು ಗಂಧ ಅದೇಕೆ?
ಮಧ್ಯದ ದ್ವಾರದ ಲಕ್ಷಣದಿಂದ,
ಪಾದಪದ ಜಾತಿಭಿನ್ನದಿಂದ.
ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಭಿನ್ನವಾಯಿತ್ತು.
ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ,
ಕುರುಹು ಹಿಂಗಿದ ದ್ವಾರದಂತೆ,
ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ
ನೂಲು ಮುಂದಳ ಹರಿಯ ಮುಚ್ಚುವಂತೆ
ಕರುಹಿನ ಭಿನ್ನ ನಾಮನಷ್ಟವಾಗುತ್ತದೆ,
ನಿಜತತ್ವದ ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ,
Art
Manuscript
Music
Courtesy:
Transliteration
Malayajada madhyadalli vanśa pudidire
muṭṭadu gandha adēke?
Madhyada dvārada lakṣaṇadinda,
pādapada jātibhinnadinda.
Ā terananaridalli idiriṭṭu kuruhu bhinnavāyittu.
Ātmaṅge arivu sūjiya moneyante,
kuruhu hiṅgida dvāradante,
ubhayava bhēdisi ā dvāradalli eyduva
nūlu mundaḷa hariya muccuvante
karuhina bhinna nāmanaṣṭavāguttade,
nijatatvada beḷagu tōruttade,
sadāśivamūrtiliṅgadalli,