Index   ವಚನ - 8    Search  
 
ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯವಾಯಿತ್ತು. ಆ ಜಲ ಸಂಚಾರದಿಂದ ಕದಲೆ ಮತ್ತೆ ಪ್ರತಿರೂಪಿಂಗೆ ಎಡೆಯುಂಟೆ? ಚಿತ್ತ ಸಂಚಾರಿಸುವಲ್ಲಿ ಕುರುಹಿನ ಗೊತ್ತಿಗೆಒಡೆತನವುಂಟೆ? ಇಂತೀ ಉಭಯದ ಸಕೀಲ ನಿಂದು, ಕಳೆ ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.