Index   ವಚನ - 11    Search  
 
ಮಂಜಿನ ಉದಕ ವಾಯುಸಂಚಾರ ಮೋಡವಿಲ್ಲದೆ ಕರೆವಂತೆ ಮನಪ್ರಕೃತಿ ಸಂಚಾರ ಹಿಂಗಿ, ಕಲೆದೋರದ ಕುರುಹಿನಲ್ಲಿ ಸಲೆ ನಿಂದು ಉಭಯವಳಿದು ಉಳುಮೆ ತಲೆದೋರಿ ಕಲೆ ಅಳಿದು ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.