Index   ವಚನ - 12    Search  
 
ಕಲ್ಪತರುವಿಂಗೆ ಅಪ್ಪು ಎಯ್ದುವಂತೆ, ಇಕ್ಷುದಂಡಕ್ಕೆ ಮಧುರರಸ ಬೆಚ್ಚಂತೆ, ಕ್ಷೀರವಿರೋಧಿಗೆ ಹಗೆ ಸ್ನೇಹವಾದಂತೆ, ಆ ಉಭಯದ ಭೇದ. ಇದಿರಿಟ್ಟು ಕುರುಹು ಅರಿವ ಮನ ಎರಡಳಿದಲ್ಲಿಯೇ ಕುರುಹಳಿದು ನಿಂದುಳುಮೆ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.