ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ,
ಹೆಂಟೆ ಶಿಲೆ ಹೋರಿದಲ್ಲಿವುಂಟೆ?
ಅರಿದವನಲ್ಲಿ ಒಡಗೂಡುವ ಸುಖವಲ್ಲದೆ,
ಬರಿಯನಲ್ಲಿ, ಅರಿವು ಹೀನನಲ್ಲಿ,
ಅರಿವಿನ ಕುರುಹ ಮರೆದಾಡುವನಲ್ಲಿ,
ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ.
ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು
ಅವ ಕೊಟ್ಟರಿವಿನ ಕುರುಹ ಮರೆಯಬೇಡ.
ಆ ಮರೆಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ ಅದೆ.
Art
Manuscript
Music
Courtesy:
Transliteration
Kallu kallu tākidalli kiccina kiḍiyallade,
heṇṭe śile hōridallivuṇṭe?
Aridavanalli oḍagūḍuva sukhavallade,
bariyanalli, arivu hīnanalli,
arivina kuruha maredāḍuvanalli,
sureya maḍakeya pūjisi kuḍivavanantāgabēḍa.
Bariya vācāsid'dhiyalli aridehenendu
ava koṭṭarivina kuruha mareyabēḍa.
Ā mareyalli beḷagu tōruttade
sadāśivamūrtiliṅgadalli ade.