Index   ವಚನ - 17    Search  
 
ಬೇರಿಗೆ ನೀರನೆರೆದಲ್ಲಿ ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ ಸರ್ವಾಂಗವ ವೇಧಿಸಿ ಸಂಪನ್ನಿಕೆಯ ದೃಕ್ಕಿಂಗೆ ತೋರುವಂತೆ, ಚಿತ್ತುವಿನ ಎರಕ ನಿಜತತ್ವದ ಕುರುಹಿನಲ್ಲಿ ಪರಿಪೂರ್ಣವಾಗಿ ಸಂಪದ ತೋರುತ್ತದೆ. ಕುರಿತ ಕುರುಹಿನ ಮರೆಯಲ್ಲಿ ಅರಿವು ನಿಂದು ಕುರುಹು ನಿಷ್ಪತ್ತಿಯಾಗುತ್ತದೆ ಎಂಬ ಸಂದೇಹ ನಿಂದಿತ್ತು. ಎಂಬುದನರಿತಾಗ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.