ಶಶಿಕಾಂತದ ಶಿಲೆ ಒಸರುವಂತೆ,
ಕುಸುಮ ಋತುಕಾಲಕ್ಕೆ ದೆಸೆಗೆ ಪಸರಿಸುವಂತೆ,
ಅಂಗ ಸಂಬಂಧಕ್ಕೆ, ಆತ್ಮನ ಅರಿವಿಂಗೆ, ಮಾಡುವ ತತ್ಕಾಲಕ್ಕೆ,
ಆ ಭಾವದಲ್ಲಿ ಭಾವಿಸಿ ನಾನೆಂಬುದನಳಿದು
ನೀನೆಂಬುದಕೆ ಠಾವಿಲ್ಲದೆ, ಆ ಭಾವವೆ ಬೆಳಗುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
Art
Manuscript
Music
Courtesy:
Transliteration
Śaśikāntada śile osaruvante,
kusuma r̥tukālakke desege pasarisuvante,
aṅga sambandhakke, ātmana ariviṅge, māḍuva tatkālakke,
ā bhāvadalli bhāvisi nānembudanaḷidu
nīnembudake ṭhāvillade, ā bhāvave beḷaguttade
sadāśivamūrtiliṅgadalli.