ಭೂಮಿಯ ಬಡತನಕ್ಕೆ ಗೆಯ್ದರುಂಟೆ?
ತಳಿಗೆ ಹಸಿಯಿತ್ತೆಂದು ಇಕ್ಕಿದರುಂಟೆ?
ಲಿಂಗಕ್ಕೆ ಉಪಚಾರವ ಮಾಡುವಾಗ ಆ ಅಂಗ
ಏತರಿಂದವೊದಗಿತ್ತೆಂಬುದನರಿ.
ತನ್ನ ಕುರಿತು ಮಾಡುವ ಸುಖಭೋಗಂಗಳಿಗೆ
ಲಿಂಗಕ್ಕೆಂದು ಪ್ರಮಾಳಿಸಲಿಲ್ಲ
ಅದೆಂತೆಂದಡೆ:
ಬಯಲರಿಯದ ಜಗವುಂಟೆ?
ವಾಯುವರಿಯದ ಗಂಧವುಂಟೆ?
ಅಪ್ಪುವರತ ಸಕಲ ಚೇತನವುಂಟೆ?
ದೃಷ್ಟವನೆ ಕಂಡು, ಇದಿರಿಟ್ಟು ಶ್ರೋತ್ರದಲ್ಲಿ ಕೇಳಿ,
ಇಷ್ಟನರಿಯದೆ ನಾ ಕೊಟ್ಟೆ-ವಸ್ತು ಕೊಂಡಿತ್ತೆಂಬ ಭಾವವಳಿದು,
ಅರಿದ ಮರೆಯಲ್ಲಿ ಬೆಳಗು ದೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.
Art
Manuscript
Music
Courtesy:
Transliteration
Bhūmiya baḍatanakke geydaruṇṭe?
Taḷige hasiyittendu ikkidaruṇṭe?
Liṅgakke upacārava māḍuvāga ā aṅga
ētarindavodagittembudanari.
Tanna kuritu māḍuva sukhabhōgaṅgaḷige
liṅgakkendu pramāḷisalilla
adentendaḍe:
Bayalariyada jagavuṇṭe?
Vāyuvariyada gandhavuṇṭe?
Appuvarata sakala cētanavuṇṭe?
Dr̥ṣṭavane kaṇḍu, idiriṭṭu śrōtradalli kēḷi,
iṣṭanariyade nā koṭṭe-vastu koṇḍittemba bhāvavaḷidu,
arida mareyalli beḷagu dōruttade,
sadāśivamūrtiliṅgadalli.