Index   ವಚನ - 24    Search  
 
ಭೂಮಿಯ ಬಡತನಕ್ಕೆ ಗೆಯ್ದರುಂಟೆ? ತಳಿಗೆ ಹಸಿಯಿತ್ತೆಂದು ಇಕ್ಕಿದರುಂಟೆ? ಲಿಂಗಕ್ಕೆ ಉಪಚಾರವ ಮಾಡುವಾಗ ಆ ಅಂಗ ಏತರಿಂದವೊದಗಿತ್ತೆಂಬುದನರಿ. ತನ್ನ ಕುರಿತು ಮಾಡುವ ಸುಖಭೋಗಂಗಳಿಗೆ ಲಿಂಗಕ್ಕೆಂದು ಪ್ರಮಾಳಿಸಲಿಲ್ಲ ಅದೆಂತೆಂದಡೆ: ಬಯಲರಿಯದ ಜಗವುಂಟೆ? ವಾಯುವರಿಯದ ಗಂಧವುಂಟೆ? ಅಪ್ಪುವರತ ಸಕಲ ಚೇತನವುಂಟೆ? ದೃಷ್ಟವನೆ ಕಂಡು, ಇದಿರಿಟ್ಟು ಶ್ರೋತ್ರದಲ್ಲಿ ಕೇಳಿ, ಇಷ್ಟನರಿಯದೆ ನಾ ಕೊಟ್ಟೆ-ವಸ್ತು ಕೊಂಡಿತ್ತೆಂಬ ಭಾವವಳಿದು, ಅರಿದ ಮರೆಯಲ್ಲಿ ಬೆಳಗು ದೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.