Index   ವಚನ - 23    Search  
 
ಶಶಿಕಾಂತದ ಶಿಲೆ ಒಸರುವಂತೆ, ಕುಸುಮ ಋತುಕಾಲಕ್ಕೆ ದೆಸೆಗೆ ಪಸರಿಸುವಂತೆ, ಅಂಗ ಸಂಬಂಧಕ್ಕೆ, ಆತ್ಮನ ಅರಿವಿಂಗೆ, ಮಾಡುವ ತತ್ಕಾಲಕ್ಕೆ, ಆ ಭಾವದಲ್ಲಿ ಭಾವಿಸಿ ನಾನೆಂಬುದನಳಿದು ನೀನೆಂಬುದಕೆ ಠಾವಿಲ್ಲದೆ, ಆ ಭಾವವೆ ಬೆಳಗುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.