Index   ವಚನ - 27    Search  
 
ರೂಪಿಗೆ ನಿರೂಪೆಂದು ಕುರುಹಿಟ್ಟುಕೊಂಡಿಪ್ಪರು, ರೂಪಿನೊಳಗೆ ತಿರುಗಾಡುವ ನಿರೂಪೆಂದರಿಯದೆ, ರೂಪಡಗಿದಲ್ಲಿ ಹಿಡಿದೆ ಬಿಟ್ಟೆನೆಂಬ ಸಂದೇಹವಡಗಿತ್ತು. ಅಡಗುವನ್ನಬರ ತಾನೆ ಕುರುಹೆ? ಬೇವಿಂಗೆ ಕಹಿ, ಬೆಲ್ಲಕೆ ಸಿಹಿ ಇವ ಎರಡಳಿದಲ್ಲಿ ನಾನೀನೆಂಬನ್ನಕ್ಕ ಏನೂ ಎನಲಿಲ್ಲ. ಅದು ನಾಮ ನಷ್ಟವಾಗೆ, ಆದಲ್ಲಿ ಅದೆ ಕಳೆಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.