ಕಾಯವಿದ್ದು ಕಾಬುದು ವಿಜ್ಞಾನ,
ಜೀವವಿದ್ದು ಕಾಬುದು ಸುಜ್ಞಾನ,
ಎರಡಳಿದು ತೋರಿಕೆಯಲ್ಲಿ
ಕಾಬುದು ಪರಂಜ್ಯೋತಿಜ್ಞಾನ,
ಇಂತೀ ಮೂರು ಮುಖವ ಏಕವ ಮಾಡಿ
ಬೇರೊಂದು ಕಾಬುದು ಪರಮಪ್ರಕಾಶಜ್ಞಾನ.
ಇಂತೀ ಅಂತರ ಪಟಂತರದಲ್ಲಿ ನಿಂದು ನೋಡುವ
ಸಂದೇಹವ ಹರಿದ ಸಂದಿನಲ್ಲಿ
ಕುಂದದ ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ.
Art
Manuscript
Music
Courtesy:
Transliteration
Kāyaviddu kābudu vijñāna,
jīvaviddu kābudu sujñāna,
eraḍaḷidu tōrikeyalli
kābudu paran̄jyōtijñāna,
intī mūru mukhava ēkava māḍi
bērondu kābudu paramaprakāśajñāna.
Intī antara paṭantaradalli nindu nōḍuva
sandēhava harida sandinalli
kundada beḷagu tōruttade,
sadāśivamūrtiliṅgadalli.