ವಸ್ತು ಸ್ವಯಂಭುವಾಗಿದ್ದಲ್ಲಿ ನಾಮರೂಪುಕ್ರೀಗೆ ಹೊರಗಾಗಿದ್ದಿತ್ತು.
ತನ್ನಯ ಸುಲೀಲೆ ಹಿಂಗಿ ಜಗಹಿತಾರ್ಥವಾಗಿ ಉಮಾಪತಿಯ ಧರಿಸಿದಲ್ಲಿ
ತ್ರಿವಿಧಮೂರ್ತಿಯ ಭಾವ ಕಲ್ಪಿಸಿದಲ್ಲಿ, ಕ್ರಿಯಾಸಂಪದಕ್ಕೆ ಒಳಗಾಗಿ,
ಅಷ್ಟವಿಧಾರ್ಚನೆ ಷೋಡಶ ಉಪಚರ್ಯವ ಮಾಡಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Vastu svayambhuvāgiddalli nāmarūpukrīge horagāgiddittu.
Tannaya sulīle hiṅgi jagahitārthavāgi umāpatiya dharisidalli
trividhamūrtiya bhāva kalpisidalli, kriyāsampadakke oḷagāgi,Aṣṭavidhārcane ṣōḍaśa upacaryava māḍabēku,
sadāśivamūrtiliṅgavanarivudakke.