Index   ವಚನ - 55    Search  
 
ತನ್ನ ಶರೀರದ ಗುಣವನಳಿದು, ಕರಣೇಂದ್ರಿಯದ ಗುನ್ಮದ ಗಲಗ ಕಿತ್ತು, ಉಚ್ಚೆಯ ಬಚ್ಚಲ ಕೊಚ್ಚೆಯ ಕೊಳಕ ತೊಡೆದು, ತ್ರಿಸಂಧಿಯಲ್ಲಿ ತ್ರಿಗುಣದ ತ್ರಿಕಾಲವ ಭೇದಿಸುತ್ತ, ತನ್ನಯ ಕರಕಮಲದಲ್ಲಿ ಒದಗಿದ ಶಿಷ್ಯವರ್ಗದ ಅಸ್ತಿ ನಾಸ್ತಿಯನರಿತು ಬಿಡುಮುಡಿಯಲ್ಲಿ ಇರಬೇಕು. ಹೀಗಲ್ಲದೆ, ತೆಂಗನೇರಿದ ಲಂಡನಂತೆ ಎಲ್ಲವು ತನಗೆ ಸರಿಯೆಂದಡೆ, ಬಲ್ಲವರೊಪ್ಪುವರೆ ಅಯ್ಯಾ ಅವನ ಗುರುತನದ ಇರವು. ಬಟ್ಟೆಯ ಬಡಿದು ಉಂಬವಂಗೆ ಸತ್ಕರ್ಮದ ಜೀವದ ದಯವುಂಟೆ ಅಯ್ಯಾ? ಇದು ಕಾರಣದಲ್ಲಿ, ಸದ್ಭಾವ ಗುರುವಾಗಬೇಕು, ನಿರ್ಮಲಾತ್ಮಕ ಶಿಷ್ಯನಾಗಬೇಕು. ಇಂತೀ ಉಭಯವನರಿತಲ್ಲಿ ಉರಿ ಕರ್ಪುರದಿರವಿನಂತಾಗಬೇಕು, ಸದಾಶಿವಮೂರ್ತಿಲಿಂಗವನರಿವ ಭೇದಕ್ಕೆ.