Index   ವಚನ - 56    Search  
 
ಗುರುವಾದಲ್ಲಿ ಭವಂ ನಾಸ್ತಿಯಾಗಬೇಕು, ಚರವಾದಲ್ಲಿ ಆಚಾರ ಮೂರ್ತಿಯಾಗಬೇಕು, ಲಿಂಗವಾದಲ್ಲಿ ನಿರಂಗಮಯ ಅವಿರಳ ತತ್ವಸ್ವರೂಪವಾಗಬೇಕು. ಇಂತಿ ಮೂರು ಗುಣ ಭಾವಶುದ್ಧವಾದಲ್ಲಿ ಭಾವಿಸಿ ಅರಿವ ಸದ್ಭಕ್ತನಾಗಬೇಕು, ಆತನಂಗದಿರವು ಸದಾಶಿವಮೂರ್ತಿಲಿಂಗವು ತಾನೆ.