ಗುರುವಾದಲ್ಲಿ ಭವಂ ನಾಸ್ತಿಯಾಗಬೇಕು,
ಚರವಾದಲ್ಲಿ ಆಚಾರ ಮೂರ್ತಿಯಾಗಬೇಕು,
ಲಿಂಗವಾದಲ್ಲಿ ನಿರಂಗಮಯ ಅವಿರಳ ತತ್ವಸ್ವರೂಪವಾಗಬೇಕು.
ಇಂತಿ ಮೂರು ಗುಣ ಭಾವಶುದ್ಧವಾದಲ್ಲಿ ಭಾವಿಸಿ ಅರಿವ ಸದ್ಭಕ್ತನಾಗಬೇಕು,
ಆತನಂಗದಿರವು ಸದಾಶಿವಮೂರ್ತಿಲಿಂಗವು ತಾನೆ.
Art
Manuscript
Music
Courtesy:
Transliteration
Guruvādalli bhavaṁ nāstiyāgabēku,
caravādalli ācāra mūrtiyāgabēku,
liṅgavādalli niraṅgamaya aviraḷa tatvasvarūpavāgabēku.
Inti mūru guṇa bhāvaśud'dhavādalli bhāvisi ariva sadbhaktanāgabēku,
ātanaṅgadiravu sadāśivamūrtiliṅgavu tāne.