ಉಪಾಧಿ ಉಳ್ಳನ್ನಕ್ಕ ಗುರುವಲ್ಲ,
ವೇಷವ ಹೊತ್ತು ಬಾಗಿಲ ಕಾಯುವನ್ನಕ್ಕ ಜಂಗಮವಲ್ಲ,
ಶಕ್ತಿಸಮೇತವುಳ್ಳನ್ನಕ್ಕ ಲಿಂಗವಸ್ತುವಲ್ಲ.
ಅದೆಂತೆಂದಡೆ:
ಏತರಲ್ಲಿದ್ದಡೂ ಅಹಿಶರೀರವ ಬಲಿದು
ತದ್ರೂಪ ಹಾಕಿದಂತಿರಬೇಕು.
ಇದು ಅರಿವಿನ ಒಡಲು,
ಸದಾಶಿವಮೂರ್ತಿಲಿಂಗದ ಇರವು.
Art
Manuscript
Music
Courtesy:
Transliteration
Upādhi uḷḷannakka guruvalla,
vēṣava hottu bāgila kāyuvannakka jaṅgamavalla,
śaktisamētavuḷḷannakka liṅgavastuvalla.
Adentendaḍe:
Ētaralliddaḍū ahiśarīrava balidu
tadrūpa hākidantirabēku.
Idu arivina oḍalu,
sadāśivamūrtiliṅgada iravu.