Index   ವಚನ - 58    Search  
 
ಗುರುಚರಪರದ ಇರವು ಹೇಗಿರಬೇಕೆಂದಡೆ: ಉರಿಯನೊಳಕೊಂಡ ಕಲ್ಲಿನಂತಿರಬೇಕು, ತೈಲವನೊಳಕೊಂಡ ತಿಲದಂತಿರಬೇಕು, ದ್ರವವನೊಳಕೊಂಡ ಅರಗಿನಂತಿರಬೇಕು, ಬಯಲನೊಳಕೊಂಡ ಕರ್ಪುರದಂತಿರಬೇಕು. ನೋಡಿದಡಂಗವಾಗಿ, ಮಥನಕ್ಕೆ ಬಯಲಾಗಿ ತೋರುತ್ತಿಹ ಮೂರ್ತಿ ತಾನೆ, ನಿರಂಗ ಸದಾಶಿವಮೂರ್ತಿಲಿಂಗವು ತಾನೆ.