Index   ವಚನ - 73    Search  
 
ಸಹಭೋಜನ ಮಾಡುವ ಸಾಧನೆವಂತರು ಕೇಳಿರೊ: ಲಿಂಗ ಕರ್ತೃವಾಗಿ ನೀ ಭೃತ್ಯನಾಗಿದ್ದಲ್ಲಿ ಲಿಂಗ ಅಮಲ, ನೀ ಮಲದೇಹಿ, ನಿನಗೆ ಪ್ರಪಂಚು, ಲಿಂಗವು ನಿಃಪ್ರಪಂಚು, ನೀ ಅಂಗ, ಲಿಂಗವು ನಿರಂಗ. ಲಿಂಗಕ್ಕೂ ನಿನಗೂ ಸಹಭೋಜನವೆಂತುಟಯ್ಯಾ? ಜಾಗ್ರದಲ್ಲಿ ತೋರಿ, ಸ್ವಪ್ನದಲ್ಲಿ ಕಂಡುದ ಲಿಂಗಕ್ಕೆ ಸಹಭೋಜನವ ಮಾಡುವ ಪರಿಯಿನ್ನೆಂತೊ? ಸಾಕು ಕುಟಿಲದ ಊಟ, ಸದಾಶಿವಮೂರ್ತಿಲಿಂಗವು ಮುಟ್ಟದ ಅರ್ಪಿತ.