Index   ವಚನ - 74    Search  
 
ಬಂಟ ಒಡೆಯನೊಡನೆ ಉಂಡಲ್ಲಿ ದಾಸತನವಳಿಯಿತ್ತು. ನೀ ಮರೆದು ಮಲಗಿದ್ದಲ್ಲಿ, ಸ್ವಪ್ನವ ಕಾಬಲ್ಲಿ, ಲಿಂಗದ ಕೂಟವೆಲ್ಲಿದ್ದಿತ್ತು? ನೀ ಸ್ತ್ರೀಸಂಭೋಗವ ಮಾಡುವಲ್ಲಿ ಲಿಂಗ ನಿನ್ನಲ್ಲಿ ಸಹಕೂಟದಿ ಇದ್ದ ಠಾವಾವುದು? ಸಾಕು, ಅರ್ತಿಕಾರರ ಹೊತ್ತುಹೋಕನ ಅರ್ಪಿತ! ಲಿಂಗ ಅಂಗದಿಂದ ಹಿಂಗಿದಾಗವೆ ಸ್ವಪ್ನದ ಮರವೆ, ಮುಟ್ಟದ ಅರ್ಪಿತ. ಇದು ನಿಶ್ಚಯವಲ್ಲ, ಸದಾಶಿವಮೂರ್ತಿಲಿಂಗಕ್ಕೆ ಹೊರಗು.