Index   ವಚನ - 81    Search  
 
ಎಲ್ಲವು ಲಿಂಗಕ್ಕೆ ಸಲ್ವುದೆಂಬುದನರಿದು, ಸಂಕಲ್ಪಸೂತಕವಳಿದು. ಬಂದ ಪದಾರ್ಥವ ಲಿಂಗಭಾಜನದಲ್ಲಿ ಸಹಭೋಜನವ ಮಾಡುವುದು ಲಿಂಗಭರಿತಾರ್ಪಣ. ಲಿಂಗಕ್ಕೂ ತನಗೂ ಭಿನ್ನಭಾವವಿಲ್ಲದೆ ಲಿಂಗದೊಳಗೆ ಸಲೆ ಸಂದು ಒಂದಾಗಿ ಕೂಡಿದುದು ಶರಣಭರಿತಾರ್ಪಣ, ಸದಾಶಿವಮೂರ್ತಿಲಿಂಗಕ್ಕೆ ತೃಪ್ತಿ.