ಭಕ್ತಂಗೆ ಕ್ರೀ, ಜಂಗಮಕ್ಕೆ ನಿಃಕ್ರೀಯೆಂದೆನಬಾರದು.
ಜಂಗಮಕ್ಕೆ ಸದ್ಭಕ್ತಿ, ಸದಾಚಾರ,
ಸಕ್ರೀ ಇಂತೀ ಆಚಾರದಲ್ಲಿ ಇರಬೇಕು.
ಅದೆಂತೆಂದಡೆ: ಪುರುಷನ ಆಚಾರ ಸತಿಗೆ ಕಟ್ಟು,
ಜಂಗಮದ ಆಚಾರ ಭಕ್ತಂಗೆ ಸಂಪದದ ಬೆಳೆ.
ಅವತಾರಕ್ಕೆ ವೇಷ, ಅರಿವಿಂಗೆ ಆಚಾರ.
ಆ ಜಂಗಮಭಕ್ತನ ಇರವು ಘಟಪ್ರಾಣದಂತೆ.
ಸದಾಶಿವಮೂರ್ತಿಲಿಂಗವು ತಾನೆ.
Art
Manuscript
Music
Courtesy:
Transliteration
Bhaktaṅge krī, jaṅgamakke niḥkrīyendenabāradu.
Jaṅgamakke sadbhakti, sadācāra,
sakrī intī ācāradalli irabēku.
Adentendaḍe: Puruṣana ācāra satige kaṭṭu,
jaṅgamada ācāra bhaktaṅge sampadada beḷe.
Avatārakke vēṣa, ariviṅge ācāra.
Ā jaṅgamabhaktana iravu ghaṭaprāṇadante.
Sadāśivamūrtiliṅgavu tāne.