ಕಂಗಳಲ್ಲಿ ನೋಡಿ, ಕೈಯ್ಯಲ್ಲಿ ಮುಟ್ಟಿ,
ನಾಸಿಕ ವಾಸನೆಯನರಿದು
ಜಿಹ್ವೆಗೆ ರುಚಿ ಮುಟ್ಟುವುದಕ್ಕೆ ಮುನ್ನವೆ
ಮೃದು ಕಠಿಣ ಕಠಿಣ[ತರ] ತಾನರಿವುದಕ್ಕೆ ಮೊದಲೆ,
ಲಿಂಗ ಮುಂತಾಗಿ ಅರ್ಪಿಸಿಕೊಂಬುದು
ಅರ್ಪಿತ ಅವಧಾನಿಯ ಯುಕ್ತಿ.
ರಸಘಟಿಕೆಯ ಮಣಿ ಅಸಿಯ ಮೊನೆಗೆ ನಿಲುವಂತೆ,
ಲಿಂಗ ಅರ್ಪಿತಕ್ಕೂ ಅರಿವ ಚಿತ್ತಕ್ಕೂ ಎಡೆಬಿಡುವಿಲ್ಲದ
ಪರಿಪೂರ್ಣವಾಗಿ ನಿಂದುದು ಭರಿತಾರ್ಪಣ,
ಸದಾಶಿವಮೂರ್ತಿಲಿಂಗವು ತಾನಾಗಿ.
Art
Manuscript
Music
Courtesy:
Transliteration
Kaṅgaḷalli nōḍi, kaiyyalli muṭṭi,
nāsika vāsaneyanaridu
jihvege ruci muṭṭuvudakke munnave
mr̥du kaṭhiṇa kaṭhiṇa[tara] tānarivudakke modale,
liṅga muntāgi arpisikombudu
arpita avadhāniya yukti.
Rasaghaṭikeya maṇi asiya monege niluvante,
liṅga arpitakkū ariva cittakkū eḍebiḍuvillada
paripūrṇavāgi nindudu bharitārpaṇa,
sadāśivamūrtiliṅgavu tānāgi.