Index   ವಚನ - 96    Search  
 
ಮಾಡುವ ಸೇವೆಯನರಿತು ಮಾಡಿಸಿಕೊಂಬುದು ಗುರುಸ್ಥಲ. ನೆಮ್ಮಿದ ನೆಮ್ಮುಗೆಯನರಿತು ಚರಿಸುವುದು ಜಂಗಮಸ್ಥಲ. ಇಂತೀ ಉಭಯದ ಒಡಲನರಿತು ಮಾಡುವುದು ಸದ್ಭಕ್ತಿಸ್ಥಲ. ಆ ಸದ್ಭಕ್ತನಂಗವೆ ಸದಾಶಿವಮೂರ್ತಿಲಿಂಗದ ಒಡಲು.