ಮೂರು ಲೋಕವನೆಲ್ಲವ ಗಾಳಿಯಲ್ಲಿ
ತೂರಿ ಬಂದ ಗುಂಗುರು ನುಂಗಿತ್ತು.
ಮೂರು ಲೋಕದ ರಾಯರು ಕೂಡಿ
ಗುಂಗುರ ಕೊಂದಹೆನೆಂದಡೆ, ಆರಿಗೂ ಅಸಾಧ್ಯ.
ಆ ಗುಂಗುರ ಬಾಯಲ್ಲಿ ಕತ್ತರಿವಾಣಿ, ಕಾಲಿನಲ್ಲಿ ಕಂಡೆಹ,
ಅಂಡದಲ್ಲಿ ಕಾಳಕೂಟ, ಪಿಂಡವೆಲ್ಲವೂ ಅಸಿಯ ಬಳಗ.
ಅದ ಕೊಂದು ನಿಂದವಗಲ್ಲದೆ
ಸದಾಶಿವಮೂರ್ತಿಲಿಂಗದ ಬೆಳಗಿಲ್ಲ.
Art
Manuscript
Music
Courtesy:
Transliteration
Mūru lōkavanellava gāḷiyalli
tūri banda guṅguru nuṅgittu.
Mūru lōkada rāyaru kūḍi
guṅgura kondahenendaḍe, ārigū asādhya.
Ā guṅgura bāyalli kattarivāṇi, kālinalli kaṇḍ'̔eha,
aṇḍadalli kāḷakūṭa, piṇḍavellavū asiya baḷaga.
Ada kondu nindavagallade
sadāśivamūrtiliṅgada beḷagilla.