ವೇದವ ನುಡಿವಲ್ಲಿ ವಿಪ್ರರು
ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ?
ಅದು ಈಚೆಯ ಮಾತು.
ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ
ದಿವ್ಯಜ್ಞಾನ ಪರಮಪ್ರಕಾಶ[ವು],
ಭಂಡರಿಗೇಕೆ ಸದಾಶಿವಮೂರ್ತಿಲಿಂಗದ ಅರಿವು?
Art
Manuscript
Music
Courtesy:
Transliteration
Vēdava nuḍivalli vipraru
mattārū śūdrajāti kēḷadante nuḍivaradētakke?
Adu īceya mātu.
Kaṇḍakaṇḍavaroḍane hēḷikoṇḍāḍuttippa
divyajñāna paramaprakāśa[vu],
bhaṇḍarigēke sadāśivamūrtiliṅgada arivu?