Index   ವಚನ - 138    Search  
 
ನಿಕ್ಷೇಪವ ನೀಕ್ಷೆಪಿಸುವಲ್ಲಿ ಮತ್ತಾರೂ ಅರಿಯದಂತೆ ಇರಿಸಬೇಕೆಂಬುದಕ್ಕಿಂದವು ಕಡೆಯೆ ಶಿವತತ್ವಪರಮಜ್ಞಾನ? ಇಂತಿದನರಿತು ಲಿಂಗಬಾಹಿರರಲ್ಲಿ, ಕಂಡ ನಿಂದ ಠಾವಿನಲ್ಲಿ, ಬಂದಂತೆ ಬಾಯ ಬಡಿವರಲ್ಲಿ ಶಿವಪ್ರಸಂಗವನೊಂದನೂ ನುಡಿಯಲಾಗದು. ಮೀರಿ ನುಡಿದಡೆ ಸದಾಶಿವಮೂರ್ತಿಲಿಂಗಕ್ಕೆ ದೂರ.