Index   ವಚನ - 137    Search  
 
ವೇದವ ನುಡಿವಲ್ಲಿ ವಿಪ್ರರು ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ? ಅದು ಈಚೆಯ ಮಾತು. ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ ದಿವ್ಯಜ್ಞಾನ ಪರಮಪ್ರಕಾಶ[ವು], ಭಂಡರಿಗೇಕೆ ಸದಾಶಿವಮೂರ್ತಿಲಿಂಗದ ಅರಿವು?