ವರ್ತಕದಲ್ಲಿ ವರ್ತಿಸುವನ್ನಕ್ಕ ಸತ್ಕ್ರೀಯ ಮಾಡಬೇಕು,
ಅದು ಲೇಪವಾಗಿ ನಿಂದಲ್ಲಿ ಆತ್ಮನ ಅಳಿವ ಉಳಿವನರಿಯಬೇಕು.
ಅದನರಿತು ನಿಂದು ಸ್ವಸ್ಥವಾದಲ್ಲಿ ತುರೀಯ.
ಆ ತುರೀಯ ಸಮೇತ ಸಂತೋಷದಲ್ಲಿ ನಿಂದು
ಸುಖನಿಶ್ಚಯವಾದುದೆ ಪರಮನಿರ್ವಾಣ,
ಸದಾಶಿವಮೂರ್ತಿಲಿಂಗದ ಬೆಳಗಿನ ಕಳೆ.
Art
Manuscript
Music
Courtesy:
Transliteration
Vartakadalli vartisuvannakka satkrīya māḍabēku,
adu lēpavāgi nindalli ātmana aḷiva uḷivanariyabēku.
Adanaritu nindu svasthavādalli turīya.
Ā turīya samēta santōṣadalli nindu
sukhaniścayavādude paramanirvāṇa,
sadāśivamūrtiliṅgada beḷagina kaḷe.