ಮಹಾಧರೆಯಲ್ಲಿ ಮನೆಯ ಕಟ್ಟುವುದಕ್ಕೆ,
ಕಾವಿಲ್ಲದ ಕೊಡಲಿಯಲ್ಲಿ, ಹುಟ್ಟದ ಮರನ ತರಿದು,
ಎತ್ತಿಲ್ಲ[ದೆ] ಏರಿನಲ್ಲಿ ಹೂಡಿ ತಂದವನಿವನಾರಣ್ಣಾ?
ನಾನೆಂಬುದಕ್ಕೆ ಮೊದಲೆ ನಾಮ ನಷ್ಟವಾಯಿತ್ತು.
ಸದಾಶಿವಮೂರ್ತಿಲಿಂಗ ಅಲ್ಲಿ ಸತ್ತು, ಇಲ್ಲಿ ಹೆಣನಾಯಿತ್ತು.
Art
Manuscript
Music
Courtesy:
Transliteration
Mahādhareyalli maneya kaṭṭuvudakke,
kāvillada koḍaliyalli, huṭṭada marana taridu,
ettilla[de] ērinalli hūḍi tandavanivanāraṇṇā?
Nānembudakke modale nāma naṣṭavāyittu.
Sadāśivamūrtiliṅga alli sattu, illi heṇanāyittu.