Index   ವಚನ - 152    Search  
 
ಆಡಿನ ಮೊಲೆವಾಲ ಕೋಡಗವುಂಡು, ಹಾಲ ಸಿಹಿ ತಲೆಗೇರಿ, ಬಂದವರ ಏಡುಸುತ್ತ, ನಿಂದವರ ಕಚ್ಚುತ್ತ, ಹಿಂಗದು ನೋಡಾ, ಕೋಡಗದಂದ. ಕೋಡಗವ ತಿಂದು ಆಡುವನೆ ಆರೂಢವಸ್ತು, ಸದಾಶಿವಮೂರ್ತಿಲಿಂಗಕ್ಕೆ ಎರವಿಲ್ಲದಂಗ.