ಜೇನುತುಪ್ಪವ ಹೊತ್ತು ಮಾರುವವಳ ಮಡಕೆಯ ಮೇಲೆ
ಮೂರು ತುಂಬಿ ಕುಳಿತೈಧಾವೆ.
ಒಂದು ತುಂಬಿ ಇದ್ದಿತ್ತು, ಒಂದು ತುಂಬಿ ಹಾರಿತ್ತು,
ಒಂದು ತುಂಬಿ ಸತ್ತಿತ್ತು.
ಮೂರು ತುಂಬಿ ಅಂದವ ಕಂಡುದಿಲ್ಲ.
ಮಡಕೆ ಒಡೆಯಿತ್ತು, ತುಪ್ಪವೊಕ್ಕಿತ್ತು, ಹೊತ್ತವ[ಳು] ಸತ್ತ[ಳು].
ಇದೇನು ಕೃತ್ರಿಮವೆಂದು
ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ.