ಒಂದು ಹರಿವ ಹಾವು, ಒಂದು ದನಿ ಸರಕ್ಕೆ ನಿಂದ ಹಾವು,
ಒಂದು ಉರಿವ ಹಾವು.
ಮೂವರ ನಡುವೆ ನಿಂದು ಆಡುವ ಕೋಡಗದಿರವು ಎಂತೆಂದಡೆ:
ಹರಿವ ಹಾವ ಮೆಟ್ಟಿ, ನಿಂದ ಹಾವ ಕೈಯ್ಯಲ್ಲಿ ಹಿಡಿದು,
ಉರಿವ ಹಾವ ಬಾಯಲ್ಲಿ ಕಚ್ಚಿ ಆಡುತ್ತಿರಲಾಗಿ,
ಕೋಡಗನೊಡೆಯ ಬಂದು ನೋಡಿ, ಕೋಲ ಹಿಡಿದು ಕುಟ್ಟೆ,
ಮೂರು ಹಾವ ಬಿಟ್ಟು, ಕುಟ್ಟಿದ ಕೋಲ ನುಂಗಿತ್ತು.
ಆ ಕೋಲು ಕೋಡಗದ ಒಡಲೊಳಗೊಡೆದು ಕೋಡಗ ಸತ್ತಿತ್ತು.
ದಡಿ ಒಡೆಯನ ನುಂಗಿ ಒಡೆಯನಡಗಿ,
ಸದಾಶಿವಮೂರ್ತಿಲಿಂಗವ ಒಡಗೂಡಿ ಬಚ್ಚಬಯಲಾಯಿತ್ತು.