ಉತ್ಪತ್ಯಕ್ಕೆ ಬ್ರಹ್ಮಂಗೆ ಸೃಷ್ಟಿಯ ಕೊಟ್ಟು,
ಸ್ಥಿತಿಗೆ ವಿಷ್ಣುವಿಂಗೆ ಅವತಾರಲಕ್ಷ್ಮಿಯ ಕೊಟ್ಟು,
ಲಯಕ್ಕೆ ರುದ್ರಂಗೆ ಉರಿಗಣ್ಣು, ಹತಕ್ಕೆ ಕರದಲ್ಲಿ ಕಂಡೆಹವ ಕೊಟ್ಟು,
ತ್ರೈಮೂರ್ತಿಗೆ ನಿನ್ನ ವರ ಶಕ್ತಿಯನಿತ್ತು,
ನೀ ತ್ರಿವಿಧ ನಾಸ್ತಿಯಾದೆಯಲ್ಲಾ.
ಅನಾದಿಶಕ್ತಿಯ ಭಾವವನೊಡೆದು
ಸದಾಶಿವಮೂರ್ತಿಲಿಂಗ ನೀನಾದೆಯಲ್ಲಾ.
Art
Manuscript
Music
Courtesy:
Transliteration
Utpatyakke brahmaṅge sr̥ṣṭiya koṭṭu,
sthitige viṣṇuviṅge avatāralakṣmiya koṭṭu,
layakke rudraṅge urigaṇṇu, hatakke karadalli kaṇḍ'̔ehava koṭṭu,
traimūrtige ninna vara śaktiyanittu,
nī trividha nāstiyādeyallā.
Anādiśaktiya bhāvavanoḍedu
sadāśivamūrtiliṅga nīnādeyallā.