Index   ವಚನ - 203    Search  
 
ವೇದ ಪ್ರಣವದ ಮೂಲ, ಶಾಸ್ತ್ರ ಪ್ರಣವದ ಶಾಖೆ, ಪುರಾಣ ಪ್ರಣವದ ಪರ್ಣ, ಪರಾಶಕ್ತಿಭೇದ ಪ್ರಣವದ ಒಡಲಾಗಿ ಶಕ್ತಿ ಸಮೇತವಾದೆಯಲ್ಲಾ. ಎನ್ನಂಗಕ್ಕೆ ಕುರುಹಾಗಿ, ಮನಕ್ಕೆ ಅರಿವಾಗಿ, ಬೆಳಗಿಂಗೆ ಕಳೆಯಾಗಿ, ನಿಂದು ತೋರುತ್ತಿದ್ದವ ನೀನೆ, ಸದಾಶಿವಮೂರ್ತಿಲಿಂಗವು ನಾಮರೂಪಾಗಿ.