Index   ವಚನ - 204    Search  
 
ಅಪ್ಪು ಮಣ್ಣು ಕೂಡಿ ಘಟವಾದಂತೆ, ಚಿತ್ತು ಶಕ್ತಿ ಕೂಡಿ ಎನಗೆ ಇಷ್ಟವಾಗಿ ಬಂದು ನಿಂದೆಯಲ್ಲಾ! ಚಿತ್ರ ನಿಲುವುದಕ್ಕೆ ಗೊತ್ತಾಗಿ, ಗೊತ್ತಿನ ಮರೆಯಲ್ಲಿ ನಾ ಹೊತ್ತ ಸಕಲೇಂದ್ರಿಯವನೀಸೂವುದಕ್ಕೆ ತೆಪ್ಪವಾಗಿ ಭವಸಾಗರವ ದಾಂಟಿಸಿದೆಯಲ್ಲಾ! ಭಕ್ತಿಪ್ರಿಯ ಸತ್ಯಕರಂಡಮೂರ್ತಿ ಸದಾಶಿವಮೂರ್ತಿಲಿಂಗವೆ ಎನ್ನಂಗದಲ್ಲಿ ಹಿಂಗದಿರು.