Index   ವಚನ - 231    Search  
 
ಗಂಧವೊಂದೆಂದಡೆ ಹಲವು ವಾಸನೆಯ ಕುಸುಮದಲ್ಲಿ ಸಿಕ್ಕಿ, ವಾಸನೆ ಭಿನ್ನವಾಗಿ ತೋರುವಂತೆ, ಆತ್ಮನೊಂದೆಂದಡೆ, ಹಲವು ಘಟದಲ್ಲಿ ಸಿಕ್ಕಿ, ಅವರವರ ನೆಲಹೊಲಂಗಳಲ್ಲಿ ಸಿಕ್ಕಿ, ಫಲಭೋಗಂಗಳಿಗೆ ಒಳಗಾಯಿತ್ತು. ಆತ್ಮನ ಒಲವರವೊಂದೆನಬಹುದೆ? ಸುಗಂಧಕ್ಕೂ ದುರ್ಗಂಧಕ್ಕೂ ಒಂದೆ ವಾಯು. ಅರಿವಾತ್ಮವೊಂದೆಂದಡೆ,ಉಭಯವನರಿಯಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.