Index   ವಚನ - 232    Search  
 
ಉರಿಯಂಗವೆಲ್ಲ ಆಪೋಷನಕ್ಕೊಡಲು, ಒಡಲುಗೊಂಡವರೆಲ್ಲರು ಅಪೇಕ್ಷೆಗೆ ಮೊದಲು. ಇಂತೀ ಬಿಡುಮುಡಿಯ ಬಲ್ಲವರಾರೊ? ತನುಧರ್ಮವನರಿತು ಚರಿಸಬಲ್ಲಡೆ ಜಂಗಮ, ಮನಧರ್ಮವನರಿತು ಅಡಗಬಲ್ಲಡೆ ಗುರುಮೂರ್ತಿ. ಇಂತೀ ಉಭಯದ ಭೇದವ ವೇದಿಸಬಲ್ಲಡೆ ಸದ್ಭಕ್ತ ಇಂತೀ ತ್ರಿವಿಧಭಾವ ಚಿನ್ನ ಬಣ್ಣ ವಾಸನೆಯಂತೆ, ಸದಾಶಿವಮೂರ್ತಿಲಿಂಗವು ತಾನೆ