ವೇಷವ ತೊಟ್ಟಡೆ ಜಗಕ್ಕಳುಕಲ್ಲದೆ ಎನಗಳುಕಿಲ್ಲ.
ನೀ ಲಿಂಗವ ಕೊಟ್ಟಡೆ ನೀ ನಿನ್ನನರಿದು,
ನೀ ಭವಪಾಶಕ್ಕೆ ಹೊರಗಾಗಿ
ಎನ್ನ ಹೊರಗು ಮಾಡಬೇಕಲ್ಲದೆ,
ಕುರುಡನ ಕಯ್ಯ ಕೋಲ ಕುರುಡಹಿಡಿದಂತೆ
ನೀ ಕರ್ತನಲ್ಲ ನಾ ಭೃತ್ಯನಲ್ಲ,
ನೀ ಮುಕ್ತನಲ್ಲ ನಾ ಸತ್ಯನಲ್ಲ,
ನಿಮ್ಮಯ ಚಿತ್ತ ನೊಂದಡೆ ನಿಮ್ಮಲ್ಲಿಯೆ ಇರಲಿ ಎನಗಾ ನೋವಿಲ್ಲ.
ನೀನರಿದು ಬದುಕು, ಸದಾಶಿವಮೂರ್ತಿಲಿಂಗವಾಗಬಲ್ಲಡೆ.
Art
Manuscript
Music
Courtesy:
Transliteration
Vēṣava toṭṭaḍe jagakkaḷukallade enagaḷukilla.
Nī liṅgava koṭṭaḍe nī ninnanaridu,
nī bhavapāśakke horagāgi
enna horagu māḍabēkallade,
kuruḍana kayya kōla kuruḍahiḍidante
nī kartanalla nā bhr̥tyanalla,
nī muktanalla nā satyanalla,
nim'maya citta nondaḍe nim'malliye irali enagā nōvilla.
Nīnaridu baduku, sadāśivamūrtiliṅgavāgaballaḍe.