Index   ವಚನ - 273    Search  
 
ಭಕ್ತ ತನ್ನಯ ಪಾಶವ ಗುರುವಿನ ಮುಖದಿಂದ ಕಳೆವ, ಆ ಗುರು ತನ್ನಯ ಪಾಶವ ಏತರಿಂದ ಕಳೆಯಬೇಕೆಂಬುದನರಿಯಬೇಕು. ಹಾಗರಿಯದೆ ಶಾಸ್ತ್ರಪಾಠಕನಾಗಿ ಮಾತಿನ ಮಾಲೆಯ ನುಡಿ[ವ] ಜ್ಞಾತೃ ಜ್ಞಾನ ಜ್ಞೇಯವನರಿಯ[ದ], ಭಾವಶುದ್ಧವಿಲ್ಲದ ಆಚಾರ್ಯನ ಕೈಯಿಂದ ಬಂದ ಪಾಷಾಣದ ಕುರುಹು ಅದೇತಕ್ಕೂ ಯೋಗ್ಯವಲ್ಲಾ ಎಂದೆ. ಅದು ಪುನಃ ಪ್ರತಿಷ್ಠೆಯಿಂದಲ್ಲದೆ ಲಿಂಗಚೇತನವಿಲ್ಲಾ ಎಂದೆ, ಸದಾಶಿವಮೂರ್ತಿಲಿಂಗವನರಿವುದಕ್ಕೆ.