ಭಕ್ತಿಹೀನ ಭಕ್ತಿಯ ಮಾಡುವಲ್ಲಿ
ಗುರುಲಿಂಗಜಂಗಮದ ಇರವ ಸಂಪಾದಿಸಲಿಲ್ಲ.
ಭಕ್ತಿಯುಳ್ಳವ ಅರಿತು ಭಕ್ತಿಯ ಮಾಡುವಲ್ಲಿ
ಗುರುವಿನಲ್ಲಿ ಗುಣವನರಸಬೇಕು,
ಲಿಂಗದಲ್ಲಿ ಲಕ್ಷಣವನರಸಬೇಕು,
ಜಂಗಮದಲ್ಲಿ ವಿರಕ್ತಿಯನರಸಬೇಕು ಅದೆಂತೆಂದಡೆ:
ಈ ತ್ರಿವಿಧವು ತನ್ನಯ ಪ್ರಾಣವಾದ ಕಾರಣ.
ಪರುಷ ಶುದ್ಧವಾಗಿಯಲ್ಲದೆ ಲೋಹದ ಕುಲವ ಕೆಡಿಸದು.
ತಾ ಹಿಡಿದು ಆರಾಧಿಸುವ ವಸ್ತು ಶುದ್ಧವಾಗಿಯಲ್ಲದೆ
ಪೂಜಿಸುವ ಭಕ್ತನ ಚಿತ್ತಶುದ್ಧವಿಲ್ಲ.
ಸದಾಶಿವಮೂರ್ತಿಲಿಂಗ ಶುದ್ಧವಾಗಿಯಲ್ಲದೆ
ಎನ್ನಂಗ ಶುದ್ಧವಿಲ್ಲ.
Art
Manuscript
Music
Courtesy:
Transliteration
Bhaktihīna bhaktiya māḍuvalli
guruliṅgajaṅgamada irava sampādisalilla.
Bhaktiyuḷḷava aritu bhaktiya māḍuvalli
guruvinalli guṇavanarasabēku,
liṅgadalli lakṣaṇavanarasabēku,
jaṅgamadalli viraktiyanarasabēku adentendaḍe:
Ī trividhavu tannaya prāṇavāda kāraṇa.
Paruṣa śud'dhavāgiyallade lōhada kulava keḍisadu.
Tā hiḍidu ārādhisuva vastu śud'dhavāgiyallade
pūjisuva bhaktana cittaśud'dhavilla.
Sadāśivamūrtiliṅga śud'dhavāgiyallade
ennaṅga śud'dhavilla.