Index   ವಚನ - 30    Search  
 
ಕರ್ಮದಿಂದ ಕಂಡೆಹೆನೆಂದಡೆ, ಮಲರೂಪು. ವರ್ಮದಿಂದ ಅರಿತೆಹೆನೆಂದಡೆ, ಆ ಭಾವ ಪ್ರಕೃತಿರೂಪು. ಕರ್ಮವ ಬಿಡಬಾರದು, ವರ್ಮವನರಿಯಬಾರದು. ಸುಮ್ಮನಿದ್ದಡೆ ಸಮಯಕ್ಕಲ್ಲ, ಅರಿತಡೆ ಆತ್ಮಂಗಲ್ಲ. ಮರವೆ ಅರಿವು ಉಭಯವರತಲ್ಲಿ, ಮನಸಂದಿತ್ತು ಮಾರೇಶ್ವರಾ.